Inter College Competition
ದಿನಾಂಕ 26 ಜೂಲೈ 2023 ನೇ ಬುಧವಾರದಂದು ಶ್ರೀ ಬಸವ ಪ್ರೌಢಶಾಲೆ, ಹುಸ್ಕೂರಿನಲ್ಲಿ
ತಿಂಗಳ ತಿರುಳು ಕಾರ್ಯಕ್ರಮದಡಿ ರಾಷ್ಟೀಯ ವೈದ್ಯರ ದಿನ, ವಿಶ್ವ ಜನಸಂಖ್ಯಾದಿನ ಹಾಗೂ ಕಾರ್ಗಿಲ್ ವಿಜಯ ದಿನವನ್ನು ಪರಮ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಗಳವರ ದಿವ್ಯ ಸಾನಿದ್ಯದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಯುತ ಸುರೇಶ್ ಕುಮಾರ್ ಮಾಜಿ ಯೋದರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಪುಷ್ಪ ಸುರೇಶ್, ಮತ್ತು ಶ್ರೀಯುತ ಜ್ಞಾನಪ್ರಕಾಶ್ ವೈದ್ಯರು ಗೋಪಾಲಪುರಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಪರಮ ಪೂಜ್ಯರು ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಕ್ಕಳಿಗೆ ಸಮಯ ಪಾಲನೆ ಶಿಸ್ತು ಹಾಗೂ ದೇಶ ಸೇವೆಯ ಬಗ್ಗೆ ಅರಿವು ಮೂಡಿಸಿದರು ಹಾಗೂ ದೇಶಕ್ಕಾಗಿ ಪ್ರಣಾರ್ಪಣೆ ಮಾಡಿದ ವೀರಯೋಧರ ತ್ಯಾಗವನ್ನು ಸ್ಮರಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವೇಶ್ವರ ಆಂಗ್ಲ ಪ್ರೌಢಶಾಲಾವತಿಯಿಂದ ಪರಿಸರ ದಿನಾಚರಣೆ,ರಕ್ತದಾನ ದಿನಾಚರಣೆ, ತಂದೆ ದಿನಾಚರಣೆ, ಸಮುದ್ರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶ್ರೀ ಸಿದ್ದಲಿಂಗಸ್ವಾಮೀಜಿಗಳು, ಶ್ರೀಮತಿ ಮಧುರ ಅಶೋಕ್ ಕುಮಾರ್ ( ಸ್ವಯಂ ಪ್ರೇರಿತರಾಗಿ 117 ಬಾರಿ ರಕ್ತದಾನ ಮಾಡಿ ಗಿನ್ನಿಸ್ ವಿಶ್ವ ದಾಖಲೆ ವಿಜೇತರು,). ಶ್ರೀ ತಿಮ್ಮೆಗೌಡ ಪರಿಸರ ಸ್ನೇಹಿ, ಸಮಾಜ ಸೇವಕರು, ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಮತ್ತು ಸಹ ಶಿಕ್ಷಕರು ವಿದ್ಯಾರ್ಥಿಗಳು ಭಾಗಿಯಾಗಿದ್ದರು
ದಿನಾಂಕ 27 ಜೂನ್ 2023 ಮಂಗಳವಾರ ನಾಡಪ್ರಭು ಕೆಂಪೇಗೌಡರ ಜಯಂತಿಯ ಪ್ರಯುಕ್ತ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ನಾಲ್ಕು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಪವಾಡಶ್ರೀ ಬಸವಣ್ಣ ದೇವರ ಮಠ ವತಿಯಿಂದ ಕೊಡೆ, ಕಲಿಕಾ ಸಾಮಗ್ರಿಗಳು ಮತ್ತು ಸಿಹಿಯನು ನೀಡಿದರು.