ದಿನಾಂಕ 26 ಜೂಲೈ 2023 ನೇ ಬುಧವಾರದಂದು ಶ್ರೀ ಬಸವ ಪ್ರೌಢಶಾಲೆ, ಹುಸ್ಕೂರಿನಲ್ಲಿ
ತಿಂಗಳ ತಿರುಳು ಕಾರ್ಯಕ್ರಮದಡಿ ರಾಷ್ಟೀಯ ವೈದ್ಯರ ದಿನ, ವಿಶ್ವ ಜನಸಂಖ್ಯಾದಿನ ಹಾಗೂ ಕಾರ್ಗಿಲ್ ವಿಜಯ ದಿನವನ್ನು ಪರಮ ಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಗಳವರ ದಿವ್ಯ ಸಾನಿದ್ಯದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀಯುತ ಸುರೇಶ್ ಕುಮಾರ್ ಮಾಜಿ ಯೋದರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಪುಷ್ಪ ಸುರೇಶ್, ಮತ್ತು ಶ್ರೀಯುತ ಜ್ಞಾನಪ್ರಕಾಶ್ ವೈದ್ಯರು ಗೋಪಾಲಪುರಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಪರಮ ಪೂಜ್ಯರು ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಕ್ಕಳಿಗೆ ಸಮಯ ಪಾಲನೆ ಶಿಸ್ತು ಹಾಗೂ ದೇಶ ಸೇವೆಯ ಬಗ್ಗೆ ಅರಿವು ಮೂಡಿಸಿದರು ಹಾಗೂ ದೇಶಕ್ಕಾಗಿ ಪ್ರಣಾರ್ಪಣೆ ಮಾಡಿದ ವೀರಯೋಧರ ತ್ಯಾಗವನ್ನು ಸ್ಮರಿಸಿದರು.















































































































































































