- This event has passed.
ಭಾರತೀಯ ಮೌಲ್ಯಾಧಾರಿತ ಜೀವನಪದ್ದತಿಯಿಂದ ಆರೋಗ್ಯವಂತ ಸಮಾಜ ನಿರ್ಮಾಣ.
January 12, 2019 @ 3:00 am - 10:00 am
ಬಸವಣ್ಣದೇವರ ಮಠದಲ್ಲಿ ಏಡ್ಸ್ ದಿನಚರಣೆ ಪ್ರಯುಕ್ತ ಆಯೋಜಿಸಿದ್ದ ಜನ ಜಾಗೃತಿಜಾಥಾಗೆ ಬಲೂನ್ ಹಾರಿಬಿಟ್ಟು
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಚಾಲನೆ ನೀಡಿದರು. ಶ್ರೀ ಸಿದ್ಧಲಿಂಗಸ್ವಾಮೀಜಿ ಮತ್ತಿತರರು ಇದ್ದರು.
ಪಟ್ಟಣದ ಪವಾಡ ಶ್ರೀ ಬಸವಣ್ಣದೇವರಮಠದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಶ್ರೀ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ 2019 ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎಸ್.ರವೀಂದ್ರ ಸೋಂಕಿತರಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸುವುದರ ಜತೆಗೆ ಜನಜಾಗೃತಿ ಮೂಡಿಸಿದಲ್ಲಿ ಏಡ್ಸ್‍ನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎಸ್.ರವೀಂದ್ರ ತಿಳಿಸಿದರು. ಆದರೆ ಪಾಶ್ಚಿಮಾತ್ಯ ಸಂಸ್ಕøತಿ, ಜೀವನಶೈಲಿಯ ಅನುಸರಣೆಯಿಂದಾಗಿ ಕೆಲ ಅನರ್ಥಗಳಿಗೆ ಕಾರಣವಾಗುತ್ತಿದೆ. ಇತ್ತೀಚಿಗಿನ ದಿನಗಳಲ್ಲಿ ಕಾಯಿಲೆ ಎಂದಾಕ್ಷಣ ಭಯ ಕಾಡಲಾಂಬಿಸುತ್ತದೆ. ಅದರಲ್ಲೂ ಎಲ್ಲ ಶಸ್ತ್ರಚಿಕಿತ್ಸಾ ಸಂದರ್ಭಗಳಲ್ಲಿ ಎಚ್.ಐ.ವಿ ಪರೀಕ್ಷೆಗೆ ಒಳಪಡಿಸುವುದು ಸಾಮಾನ್ಯವಾಗಿದ್ದು ಆತಂಕಕ್ಕೆ ಕಾರಣವಾಗುತ್ತಿದೆ. ಏಡ್ಸ್ ಕುರಿತ ಭಯಬೇಡ. ದೇಹಕ್ಕೆ ರೋಗ ಬಂದರೆ ಗುಣಪಡಿಸಬಹುದು ಅದರೆ ಮಾನಸಿಕ ಕಾಯಿಲೆಯನ್ನು ಗುಣಪಡಿಸಲು ಕಷ್ಟವಾಗಲಿದೆ. ಉದಾಸೀನತೆಯನ್ನು ದೂರಮಾಡಿ ಸೂಕ್ತ ಸಲಹೆ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಸಾವನ್ನು ಮುಂದೂಡಬಹುದು. ದೇಹದಲ್ಲಿ ನಿರೋಧಕ ಶಕ್ತಿ ಹೆಚ್ಚಿಕೊಳ್ಳಬೇಕು. ಸೋಂಕಿತರ ಮನೋಬಲವನ್ನು ವೃದ್ಧಿ ಮಾಡಿ ಸೋಂಕು ಹರಡದಂತೆ ಸಮುದಾಯಗಳು ಕೆಲಸ ಮಾಡಿದಲ್ಲಿ ಏಡ್ಸ್ ದಿನ ಆಚರಣೆ ಮಾಡಿದ್ದು ಸಾರ್ಥಕವಾಗಲಿದೆ. ಪೊಲೀಯೋದಂತೆ ಏಡ್ಸ್ ಮುಕ್ತ ದೇಶವಾಗಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಜಿಲ್ಲಾಪಂಚಾಯಿತಿ ಸಿಇಓ ಎನ್.ಎಂ.ನಾಗರಾಜು ಮಾತನಾಡಿ ಜಗತ್ತಿನ ಹೆಚ್ಚು ಸಾವುಗಳು ಏಡ್ಸ್ ನಿಂದ ಸಂಭವಿಸುತ್ತಿಲ್ಲ, ಏಡ್ಸ್ ವಿಶ್ವದ ಭಯಾನಕ ರೋಗವಲ್ಲ ಎಂಬುದು ಒಂದೆಡೆಯಾದರೆ ಏಡ್ಸ್‍ನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕು. ನಮ್ಮ ಮದ್ಯೆ ಇರುವ ಸೋಂಕಿತರ ಬಗ್ಗೆ ಅನುಕಂಪ ತೋರದಿದ್ದರೂ ಪರವಾಗಿಲ್ಲ, ಅವರನ್ನು ಅವಮಾನಿಸಬೇಡಿ. ಮುಜುಗರವಿಲ್ಲದೇ ಪರೀಕ್ಷೆ ಮಾಡಿಸಿಕೊಂಡು ಅಗತ್ಯವಿದ್ದಲ್ಲಿ ಮಾಗದರ್ಶನ ಚಿಕಿತ್ಸೆ ಪಡೆದುಕೊಳ್ಳಬೇಕು.ಸೊಂಕಿತರನ್ನು ಒಳಗೊಂಡಂತೆ ಸಮಾಜದಲ್ಲಿನ ಅಧಿಕಾರಿ, ವಿದ್ಯಾರ್ಥಿ, ಜನಸಮುದಾಯಗಳನ್ನು ಮನಸ್ಸು ಮಾಡಿದ್ದಲ್ಲಿ ಏಡ್ಸ್ ನಿಯಂತ್ರಣ ಸುಲಭ ಎಂದರು
ಕೇವಲ ಜೀವಂತವಾಗಿರುವುದು ಬದುಕಲ್ಲ, ಬದುಕಿದ್ದಷ್ಟು ದಿನ ಆರೋಗ್ಯವಂತರಾಗಿರುವುದು ನಿಜವಾದ ಜೀವನವಾಗಿದೆ. ಸ್ವಾಸ್ಥ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಭವಿಷ್ಯದಲ್ಲಿ ದೇಶದ ಜವಬ್ದಾರಿಯುತ ನಾಗರೀಕರಾಗುವ ಕಾಲೇಜು ವಿದ್ಯಾರ್ಥಿ ಗುರಿಯಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸಿರುವುದು ಅರ್ಥಪೂರ್ಣವಾಗಿದೆ ಎಂದು ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದರು.