ನೆಲಮಂಗಲದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಎಬಿವಿಪಿ ಬೃಹತ್ ತ್ರಿರಂಗಯಾತ್ರೆ
ಆಯೋಜಿಸಿದ್ದು ಸಹಸ್ರಸಂಖ್ಯೆಯ ವಿದ್ಯಾರ್ಥಿಗಳ ಭಾಗವಹಿಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ನಾಗರೀಕರಿಗೆ ತೊಂದರೆ ಇಲ್ಲ. ಆದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಸಾಮಾಜಿಕ ಚಿಂತಕಿ ಮಾಳವಿಕಅವಿನಾಶ್ ತಿಳಿಸಿದರು.
ಪಟ್ಟಣದ ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿದ್ದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಆಯೋಜಿಸಿದ್ದ ಬಹಿರಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಭಾರತ ರಾಷ್ಟ್ರಕ್ಕೆ 10 ಸಾವಿರ ವರ್ಷಗಳ ಕಾಲದ ಇತಿಹಾಸವಿದೆ. ಸ್ವತಂತ್ರನಂತರ ದೇಶವನ್ನಾಳಿದ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ನೆರೆರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸಿ ದೇಶವನ್ನು ಅರಸಿ ಬಂದವರಿಗೆ ವಲಸಿಗರಿಗೆ ನೆರವು ನೀಡಲು ಮುಂದಾಗಲಿಲ್ಲ, ಬದಲಿಗೆ ಇಲ್ಲಿನ ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಆದ್ಯತೆ ನೀಡಿದವು. ಆದರೆ ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳನ್ನೆ ಪ್ರಮುಖವಾಗಿಟ್ಟುಕೊಂಡು ಬಂದಿರುವ ಕೇಂದ್ರಸರ್ಕಾರ ಪೌರತ್ವ ತಿದ್ದುಪಡಿ ವಿದೇಯಕವನ್ನು ಜಾರಿಗೆ ತಂದಿದೆ. ಪಾರ್ಲಿಮೆಂಟ್ ವಿರೋದ ಪಕ್ಷ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗದ ಕಾಂಗ್ರೇಸ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಂದಿಟ್ಟುಕೊಂಡು ದೇಶದಲ್ಲಿರುವ ಮುಸಲ್ಮಾರನ್ನು ದಾರಿತಪ್ಪಿಸುತ್ತಿದೆ. ದೇಶದಲ್ಲಿ ಅರಾಜಕತೆ, ಅಭದ್ರತೆ ವಾತಾವರಣವನ್ನು ಸೃಷ್ಠಿಸುವ ಕೆಲಸ ಮಾಡುತ್ತಿದ್ದು ಪೌರತ್ವ ತಿದ್ದುಪಡಿ ಕಾಯ್ದೆ ಹಿಂದಿರುವ ನೈಜ ಸತ್ಯಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಅರ್ಥ ಮಾಡಿಕೊಳ್ಳಬೇಕು. ತಪ್ಪುಗ್ರಹಿಸಿರುವ ಜನರಿಗೆ ತಿಳುವಳಿಕೆ ನೀಡಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿರುವುದು ದೇಶದ ಪ್ರಜ್ಞಾವಂತ ಜನರೇ ಆಯ್ಕೆ ಮಾಡಿರುವ ಕೇಂದ್ರಸರ್ಕಾರ ಎಂಬುದನ್ನು ಮನಗಾಣಬೇಕಿದೆ. ದೇಶದಲ್ಲಿರುವ ನಾಗರೀಕರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯಿಸುವುದಿಲ್ಲ. ಅನ್ವಯಿಸುವುದು ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಮಾತ್ರ ಎಂಬುದನ್ನು ಮನಗಾಣಬೇಕು. ಅಸಹನೆ ಕಾರಣಕ್ಕೆ ಪ್ರತಿಪಕ್ಷಗಳು ಪ್ರತಿಭಟನೆಗೆ ಮುಂದಾಗಿವೆ ಎಂಬುದನ್ನು ತಿಳಿದುಕೊಳ್ಳಬೇಕಿದೆ. ದೇಶದ ಭವಿಷ್ಯವಾಗಿರುವ ಯುವಜನತೆ ಇಂತಹ ಅಪಪ್ರಚಾರಕ್ಕೆ ಕಿವಿಗೊಡಬೇಡಬಾರದು. ದೇಶದಲ್ಲಿ ನಡೆಯುತ್ತಿರುವ ಒಳ್ಳೆಯ ಬೆಳವಣಿಗೆಗಳಿಗೆ ಬೆಂಬಲ ನೀಡಲು ಮುಂದಾಗಿ ಎಂದರು.